Gruha Lakshmi Scheme Karnataka 2023-24
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಗೃಹ ಲಕ್ಷ್ಮೀ” ಯೋಜನೆಯ ಅರ್ಜಿ (Gruha Lakshmi Scheme Karnataka) ಯನ್ನು ಎಲ್ಲಿ, ಹೇಗೆ ಸಲ್ಲಿಸುವುದು, ಯಾರು ಅರ್ಹರು, ಈ ಯೋಜನೆಯ ಷರತ್ತುಗಳು, ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
Gruha Lakshmi Scheme, Gruha Lakshmi Scheme Karnataka, Gruha Lakshmi Scheme Apply Online, Gruhalakshmi Yojana Application Form in Kannada, ಗೃಹ ಲಕ್ಷ್ಮಿ ಯೋಜನೆ ಅರ್ಜಿ Online Link, Gruha Lakshmi Scheme Apply Online Karnataka, Sevasindhugs.karnataka.gov.in Gruha Lakshmi, Sevasindhugs.karnataka.gov.in login.
ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು “ಗೃಹ ಲಕ್ಷ್ಮೀ” ಯೋಜನೆ (Gruha Lakshmi Scheme Karnataka) ಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2,000 ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ.
2023ರ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ಘೋಷಿಸಿದ್ದರು. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾಣಕ್ಕೆ ತರಲು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.
ಈಗಾಗಲೇ ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಗೃಹ ಜ್ಯೋತಿ ಯೋಜನೆ (Gruha Lakshmi Yojana) ಯ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿದೆ. ಜುಲೈ 1 ರಿಂದ 200 ಯುನಿಟ್ ವರೆಗೆ ಗೃಹ ಬಳಕೆಗೆ ಉಚಿತ ವಿದ್ಯುತ್ ಸಿಗಲಿದೆ. ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರೀಯೆ 19-07-2023 ರಿಂದ ಶುರುವಾಗಿದೆ. ಆದ್ದರಿಂದ ಈ ಪೋಸ್ಟನಲ್ಲಿ ನಿಮಗೆ ಎಲ್ಲ ಮಾಹಿತಿಯನ್ನು ನೀಡಲಿದ್ದೇವೆ.
ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಿರುವ ಅರ್ಹ ಮನೆ ಒಡತಿಯರಿಗೆ ಈಗಾಗಲೇ 7 ಕಂತಿನ 14,000 ರೂಪಾಯಿ ಜಮಾ ಮಾಡಲಾಗಿದೆ. ನೀವು ಕೂಡ ಅರ್ಹರಾಗಿದ್ದರೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಗೃಹ ಲಕ್ಷ್ಮೀ ಯೋಜನೆಯ ಪ್ರಮುಖ ಅಂಶಗಳು
ಯೋಜನೆಯ ಹೆಸರು | ಗೃಹಲಕ್ಷ್ಮೀ ಯೋಜನೆ (Gruha Lakshmi Scheme Karnataka) |
ಯೋಜನೆಯ ಉದ್ದೇಶ | ಮಹಿಳೆಯರ ಆರ್ಥಿಕ ಸಬಲೀಕರಣ |
ಯಾರಿಗೆ ಈ ಯೋಜನೆ | ಕುಟುಂಬದ ಯಜಮಾನಿಗೆ |
ಸಿಗುವ ಸಹಾಯಧನ | ಪ್ರತಿ ತಿಂಗಳು ರೂ. 2,000 |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | ಆನ್ಲೈನ್ ಅರ್ಜಿ ಜುಲೈ 19, 2023 ರಿಂದ ಆರಂಭ |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಕೊನೆಯ ದಿನಾಂಕ ಇರುವುದಿಲ್ಲ |
ಖಾತೆಗೆ ಹಣ ಜಮಾ ಆಗುವ ದಿನಾಂಕ | ಆಗಸ್ಟ್ 15, ರ ನಂತರ |
- 1 ಗೃಹ ಲಕ್ಷ್ಮೀ ಯೋಜನೆಯ ಪ್ರಮುಖ ಅಂಶಗಳು
- 2 ಚಿಂತೆ ಬಿಡಿ, ಹೀಗೆ ಅರ್ಜಿ ಸಲ್ಲಿಸಿ
- 3 “ಗೃಹ ಲಕ್ಷ್ಮೀ” ಯೋಜನೆಯ ಉದ್ದೇಶ
- 4 ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು? – Gruhalakshmi Scheme Eligibility
- 5 ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿಗಳು
- 6 ಗೃಹಲಕ್ಷ್ಮಿ ಯೋಜನೆ ಇವರಿಗೆ ಸಿಗುವುದಿಲ್ಲ
- 7 “ಗೃಹ ಲಕ್ಷ್ಮಿ” ಯೋಜನೆಯ ಅರ್ಜಿ ಸಲ್ಲಿಸುವುದು ಹೇಗೆ?
- 8 How To Apply GruhaLakshmi Scheme In Karnataka?
- 9 Apply Online Karnataka Gruha Lakshmi Scheme 2023 ಎರಡನೇ ವಿಧಾನ
- 10 ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಬೇಕು? – Gruha Lakshmi Scheme Documents
- 11 Gruha Lakshmi Scheme Karnataka ಪ್ರಮುಖ ದಿನಾಂಕಗಳು:
- 12 Gruha Lakshmi Scheme App ಯಾವಾಗ ಬಿಡುಗಡೆ?
- 13 Gruha Lakshmi Scheme Website ಪ್ರಮುಖ ಲಿಂಕ್‌ಗಳು:
- 14 Gruha Lakshmi Yojane ಬಗ್ಗೆ ಕೊನೆಯ ಮಾತು
- 15 Gruhalakshmi Scheme Karnataka FAQs
- 16 ಗೃಹಲಕ್ಷ್ಮಿ ಯೋಜನೆಯ ಪ್ರಶ್ನೋತ್ತರಗಳು
ಚಿಂತೆ ಬಿಡಿ, ಹೀಗೆ ಅರ್ಜಿ ಸಲ್ಲಿಸಿ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಯ ನೋಂದಣಿ ಇದೀಗ ಮತ್ತಷ್ಟು ಸರಳ ಮಾಡಲಾಗಿದ್ದು, ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ (ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಬಾಪೂಜಿ ಕೇಂದ್ರ) ಭೇಟಿ ನೀಡಿ ಅರ್ಜಿ (Gruhalakshmi Yojana Application) ಸಲ್ಲಿಸಬಹುದಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದ್ದಾರೆ.
ಇಂದು ಟ್ವಿಟ್ ಮಾಡಿರುವ ಅವರು, ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಇದೀಗ ಎಸ್‌ಎಂಎಸ್ ಅವಲಂಭಿಸದೇ ಅಗತ್ಯವಾದ ದಾಖಲಾತಿಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.
ಗೃಹ ಲಕ್ಷ್ಮೀ ಯೋಜನೆ (Gruha Lakshmi Scheme) ಗೆ ಚಾಲನೆ ನೀಡಿ 7 ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿರುವುದು ಖುಷಿ ತಂದಿದೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ಧವೂ ಸಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಎಚ್ಚರಿಕೆ ನೀಡಿದ್ದಾರೆ.
ಗೃಹಲಕ್ಷ್ಮೀ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಮಂಜೂರಾತಿ ಪತ್ರ (Gruhalakshmi Sanction Letter) ವನ್ನು ನೀಡುತ್ತಾರೆ.
“ಗೃಹ ಲಕ್ಷ್ಮೀ” ಯೋಜನೆಯ ಉದ್ದೇಶ
- ಆರ್ಥಿಕವಾಗಿ ಸಬಲೀಕರಣ: ರಾಜ್ಯದ ಮಹಿಳೆಯರಯನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
- ಕುಟುಂಬದ ನಿರ್ವಹಣೆಗೆ ಸಹಾಯ: ಪ್ರತಿ ಕುಟುಂಬದ ನಿರ್ವಹಣೆಯಲ್ಲಿ ಮನೆ ಒಡತಿಯ ಪಾತ್ರ ಬಹು ಮುಖ್ಯವಾಗಿರುತ್ತದೆ. ಆದ್ದರಿಂದ ಮನೆ ಯಜಮಾನಿ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ” ಯನ್ನು ರೂಪಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು? – Gruhalakshmi Scheme Eligibility
- ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ (AAP), ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
- ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ gruhalakshmiyojane.in ಗೆ ಯೋಜನೆಗೆ ಅರ್ಹರು.
ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿಗಳು
- ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಮತ್ತು ಬಾಪುಜಿ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹದು.
- ಈ ಯೋಜನೆಯ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಜುಲೈ 19 ರಿಂದ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕಾರ ಮಾಡಲಾಗುವುದು.
- ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 16 ರ ನಂತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.
- ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುವುದು.
- ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುವುದು ಮತ್ತು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಇವರಿಗೆ ಸಿಗುವುದಿಲ್ಲ
- ಈ ಕೆಳಕಂಡ ಮಾನದಂಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಂತವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅವರಿಗೂ ಗೃಹಲಕ್ಷ್ಮಿ ಯೋಜನೆ ಲಾಭ ಸಿಗಲ್ಲ.
“ಗೃಹ ಲಕ್ಷ್ಮಿ” ಯೋಜನೆಯ ಅರ್ಜಿ ಸಲ್ಲಿಸುವುದು ಹೇಗೆ?
- “ಗೃಹ ಲಕ್ಷ್ಮಿ” ಯೋಜನೆಯ ಲಾಭ ಪಡೆಯಲು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
- ಅಥವಾ ಸರ್ಕಾರ ನೇಮಿಸಿರುವ ಸ್ವಯಂಸೇವಕ “ಪ್ರಜಾಪ್ರತಿನಿಧಿಗಳು” ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.
- “ಗೃಹಲಕ್ಷ್ಮಿ ಯೋಜನೆ” ಅರ್ಜಿಯನ್ನು ಉಚಿತವಾಗಿ ನೋಂದಣಿ ಮಾಡಲಾಗುತ್ತದೆ. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
- ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ದುಡ್ಡು ಜಮಾ ಆಗುತ್ತದೆ. ಅಥವಾ ಫಲಾನುಭವಿಯ ಬೇರೆ ಬ್ಯಾಂಕ್ ಖಾತೆಯ ಪಾಸ್‌ಬುಕ್ ನೀಡಿದರೆ ಆ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು.
How To Apply GruhaLakshmi Scheme In Karnataka?
ಮೊದಲನೇ ವಿಧಾನದ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿ ಈ ಕೇಳಗಿನಂತಿದೆ.
- Step-1: ಮೊದಲಿಗೆ ಕೇಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ಸೇವಾ ಸಿಂಧು ಅಕೌಂಟ್ ಲಾಗ್‌ಇನ್ ಮಾಡಿ.
- Step-3: ಅಲ್ಲಿ Apply For Services ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ View All Available Services ಅಂತ ಕಾಣುತ್ತದೆ ಅದನ್ನು ಸೇಲೆಕ್ಟ್ ಮಾಡಿ.
- Step-4: ನಂತರ GruhaLakshmi Yojana Pre Approved ಎಂದಿರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.
- Step-5: ಮತ್ತೊಂದು ಪುಟದಲ್ಲಿ Gruhalakshmi Application ಓಪನ್ ಆಗುತ್ತದೆ. ಅಲ್ಲಿ ಭರ್ತಿ ಮಾಡಬೇಕಾದ ಅಗತ್ಯ ಮಾಹಿತಿ ನಿಮ್ಮಲ್ಲಿ ಇರಲಿ.
- Step-6: ಮೊದಲ ಭಾಗದಲ್ಲಿ “ವೈಯಕ್ತಿಕ ವಿವರಗಳು” ಎಂದಿರುತ್ತದೆ. ಅಲ್ಲಿ ಪಡಿತರ ಚೀಟಿ ಸಂಖ್ಯೆ, ಅರ್ಜಿದಾರರ ಹೆಸರು, ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಲ್ಪಸಂಖ್ಯಾತ, ಇತರೆ) ಎಂದಿರುತ್ತದೆ. ನಿಮ್ಮ Category ಯನ್ನು ಆಯ್ಕೆ ಮಾಡಿ. ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- Step-7: ಎರಡನೇ ಭಾಗದಲ್ಲಿ “ಬ್ಯಾಂಕ್ ಖಾತೆಯ ವಿವರಗಳು” ಎಂದಿರುತ್ತದೆ. ಅಲ್ಲಿ ಎರಡು ಆಯ್ಕೆಗಳಿವೆ ಮೊದಲನೇಯದನ್ನು ಆಯ್ಕೆ ಮಾಡಿದರೆ ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ದುಡ್ಡ ಜಮಾ ಆಗುತ್ತದೆ. ಎರಡನೇ ಆಯ್ಕೆಯಲ್ಲಿ ಫಲಾನುಭವಿಯ ಬೇರೆ ಬ್ಯಾಂಕ್ ಖಾತೆಗೆ ಹಣ ಪಾವತಿಸುತ್ತಾರೆ. ಬೇರೆ ಬ್ಯಾಂಕ್ ಎಂಬ ಆಯ್ಕೆ ಮಾಡಿದರೆ. IFSC ಕೋಡ್, ಬ್ಯಾಂಕ್ ಖಾತೆಯ ಸಂಖ್ಯೆ, ಬ್ಯಾಂಕ್ ಹೆಸರು, ಶಾಖೆಯ ಹೆಸರನ್ನು ಅಲ್ಲಿ ಭರ್ತಿ ಮಾಡಿ.
- Step-8: ಮೂರನೇ ಭಾಗದಲ್ಲಿ “ಸ್ವಯಂ ಘೋಷಣೆ” ಎಂದುರುತ್ತದೆ. ಅಲ್ಲಿ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿವೆ.
- ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿತ್ತೇವೆ. ಹೌದು ಅಥವಾ ಇಲ್ಲ
- ನಾನು ಮತ್ತು ನನ್ನ ಪತಿ ಜಿಎಸ್ ಟಿ ಫೈಲಿಂಗ್ ಸಲ್ಲಿಸಿರುತ್ತೇವೆ. ಹೌದು ಅಥವಾ ಇಲ್ಲ
- ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳಿವಳಿಕೆಯಂತೆ ಸಮರ್ಪಕವಾಗಿವೆ. ನನ್ನ ಕುಟುಂಬ/ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇನೆ. (ಇದನ್ನು ಓದಿ ಅರ್ಥ ಮಾಡಿಕೊಂಡು) ✅ I Agree ಎನ್ನುವುದನ್ನು Select ಮಾಡಿ.
- Step-9: “ಆಧಾರ ದೃಢೀಕರಣ” ವಿಭಾಗ: ಆಧಾರ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಎಂದಿರುವ ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಓಟಿಪಿಯನ್ನು ಅಲ್ಲಿ ನಮೂದಿಸಿ Verify ಮಾಡಿ.
- Step-10: Word Verification: ಆರು ಅಂಕಿಗಳ ನಂಬರ್‌ನ್ನು ಖಾಲಿ ಇರುವ ಬಾಕ್ಸ್‌ನಲ್ಲಿ ಭರ್ತಿ ಮಾಡಿ. ನಂತರ ಹಸಿರು ಬಣ್ಣದ Submit ಮೇಲೆ ಕ್ಲಿಕ್ ಮಾಡಿ. ಭರ್ತಿ ಮಾಡಿರುವ ಎಲ್ಲ ಮಾಹಿತಿಗಳು ಸರಿ ಇವೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ಹಂತದ Submit ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಅಲ್ಲಿ ಸ್ವೀಕೃತಿ ಪ್ರತಿ ಸಿಗುತ್ತದೆ ಅದನ್ನು ScreenShot ತೆಗೆದುಕೊಳ್ಳಿ ಅಥವಾ PDF ಫೈಲ್ ಸೇವ್ ಮಾಡಿಕೊಳ್ಳಿ.
Apply Online Karnataka Gruha Lakshmi Scheme 2023 ಎರಡನೇ ವಿಧಾನ
- Step-1: ಮೊದಲಿಗೆ ಕೇಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ಸೇವಾ ಸಿಂಧು ಅಕೌಂಟ್ ಲಾಗ್‌ಇನ್ ಮಾಡಿ.
- Step-3: ಅಲ್ಲಿ Apply For Services ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ View All Available Services ಅಂತ ಕಾಣುತ್ತದೆ ಅದನ್ನು ಸೇಲೆಕ್ಟ್ ಮಾಡಿ.
- Step-4: ನಂತರ GruhaLakshmi Yojana ಅಂತಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- Step-5: ಹೊಸ ಪುಟದಲ್ಲಿ Gruhalakshmi Online Application ಕಾಣುತ್ತದೆ.
- Step-6: “ಆಧಾರ ದೃಢೀಕರಣ” ಎಂದಿರುತ್ತದೆ. ಆಧಾರ ಸಂಖ್ಯೆ ನಮೂದಿಸಿ, ಆಧಾರ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಓಟಿಪಿ ಎಂಟರ್ ಮಾಡಿ.
- Step-7: “ಮನೆ ಯಜಮಾನಿಯ ವಿವರಗಳು” ಎಂದಿರುತ್ತದೆ. ಅಲ್ಲಿ ಅರ್ಜಿದಾರರ ಹೆಸರು, ಆಧಾರ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ (BPL, AAP, APL), ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಲ್ಪಸಂಖ್ಯಾತ, ಇತರೆ) ಎಂದಿರುತ್ತದೆ. ನಿಮ್ಮ Category ಯನ್ನು ಆಯ್ಕೆ ಮಾಡಿ, ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಿ, ಫಲಾನುಭವಿಯ ಭಾವಚಿತ್ರವನ್ನು ಅಪಲೋಡ್ ಮಾಡಿ. Aadhaar Seeded Bank Name (ನಿಮ್ಮ ಬ್ಯಾಂಕ್ ಅಟೌಂಟ್‌ಗೆ ಆಧಾರ ಲಿಂಕ್ ಇರುವ) ಎಂಬಲ್ಲಿ ಬ್ಯಾಂಕ್ ಹೆಸರು ನಮೂದಿಸಿ ಹಾಗೂ IFSC ಕೋಡ್‌ನ್ನು ಎಂಟರ್ ಮಾಡಿ.
- Step-8: ಕುಟುಂಬ ಸದಸ್ಯರ ವಿವರಗಳು ಎಂಬ ವಿಭಾಗದಲ್ಲಿ ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರ ಪಟ್ಟಿಯಿಂದ ಯಜಮಾನಿಯ ಪತಿಯ ಹೆಸರನ್ನು ಆಯ್ಕೆ ಮಾಡಿ.
- ಮನೆ ಯಜಮಾನಿಯ ಪತಿಯ ವಿವರ ಲಭ್ಯವಿಲ್ಲದಿದ್ದಲ್ಲಿ ಈ ಆಯ್ಕೆಗಳು
- ಮೇಲೆ ತೋರಿಸಿರುವ ಪಟ್ಟಿಯಲ್ಲಿ ಯಜಮಾನರ ಹೆಸರನ್ನು ಸೇರಿಸಿ
- ಅವಿವಾಹಿತೆ
- ಬೇರ್ಪಡೆಯಾಗಿದ್ದಾರೆ.
- ಮರಣ ಹೊಂದಿದ್ದಾರೆ.
- ನಂತರ ಪತಿಯ ಆಧಾರ್ ಸಂಖ್ಯೆ, ಪತಿಯ ಹೆಸರು ಆಧಾರ್ ನಲ್ಲಿರುವಂತೆ, ಪತಿಯ ಮೊಬೈಲ್ ಸಂಖ್ಯೆ ಎಂಟರ್ ಮಾಡಿ.
- Step-9: “ಘೋಷಣೆ”– ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿವೆ.
- ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿತ್ತೇವೆ. ಹೌದು ಅಥವಾ ಇಲ್ಲ
- ನಾನು ಮತ್ತು ನನ್ನ ಪತಿ ಜಿಎಸ್ ಟಿ ಫೈಲಿಂಗ್ ಮಾಡುತ್ತಿದ್ದೇವೆ. ಹೌದು ಅಥವಾ ಇಲ್ಲ
- ನಾನು ಒದಗಿಸಿರುವ ಎಲ್ಲಾ ವಿವರಗಳು ನನ್ನ ತಿಳಿವಳಿಕೆಯಂತೆ ಸಮರ್ಪಕವಾಗಿವೆ. ನನ್ನ ಕುಟುಂಬ/ಮನೆಯಲ್ಲಿ ನಾನೇ ಮನೆ ಒಡತಿಯಾಗಿರುತ್ತೇನೆ. ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ ಸುಳ್ಳೆಂದು ಕಂಡು ಬಂದರೆ ಕಾನೂನಿನ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮೀ ಯೋಜನೆ ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬದ್ಧಳಾಗಿರುತ್ತೇನೆಂದು ಈ ಮೂಲಕ ದೃಢೀಕರಿಸುತ್ತೇನೆ. (ಇದನ್ನು ಓದಿ ಅರ್ಥ ಮಾಡಿಕೊಂಡು) ✅ I Agree ಎನ್ನುವುದನ್ನು Select ಮಾಡಿ.
- Step-10: Word Verification: ಆರು ಅಂಕಿಗಳ ನಂಬರ್‌ನ್ನು ಬಾಕ್ಸ್‌ನಲ್ಲಿ ಎಂಟರ್ ಮಾಡಿ. ನಂತರ ಹಸಿರು ಬಣ್ಣದ Submit ಬಟನ್ ಮೇಲೆ ಕ್ಲಿಕ್ ಮಾಡಿ. ಭರ್ತಿ ಮಾಡಿರುವ ಎಲ್ಲ ಮಾಹಿತಿಗಳು ಸರಿ ಇವೆಯೇ ಎಂಬುದನ್ನು ಪರಿಶೀಲಿಸಿ ಅಂತಿಮ ಹಂತದ Submit ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಅಲ್ಲಿ ಸ್ವೀಕೃತಿ ಪ್ರತಿ ಸಿಗುತ್ತದೆ ಅದನ್ನು ScreenShot ತೆಗೆದುಕೊಳ್ಳಿ ಅಥವಾ PDF ಫೈಲ್ ಸೇವ್ ಮಾಡಿಕೊಳ್ಳಿ.
ಗೃಹ ಲಕ್ಷ್ಮಿ ಯೋಜನೆಯ ಆನ್‌ಲೈನ್ ಅರ್ಜಿ ನಾಳೆ ಆರಂಭವಾಗಲಿದೆ. ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾದ ತಕ್ಷಣ ಮಾಹಿತಿ ನೀಡಲಾಗುತ್ತದೆ. ಆದ್ದರಿಂದ ನೀವು ನಮ್ಮ ವಾಟ್ಸ್‌ಆಪ್ ಗ್ರುಪ್ Join ಆಗಿ ಹಾಗೂ Notification On ಮಾಡಿಕೊಳ್ಳಿ.
- “ಗೃಹ ಲಕ್ಷ್ಮಿ ” ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ರೂ.2,000 ಸೌಲಭ್ಯ ಪಡೆಯಲು ಇಚ್ಛಿಸುವ ಫಲಾನುಭವಿಗಳು ಕೇಳಗೆ ನೀಡಿರುವ ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
- ಮನೆ ಯಜಮಾನಿಯ ಹೆಸರು ಮತ್ತು ವಿಳಾಸ, ಮನೆ ಯಜಮಾನಿಯ ಆಧಾರ ಸಂಖ್ಯೆ, ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರಗಳು, ನಿಮ್ಮ ಮೊಬೈಲ್ ನಂಬರ್ʼನ್ನು ಹಾಗೂ ಇತರೆ ಮಾಹಿತಿಯನ್ನು ಅಲ್ಲಿ ಭರ್ತಿ ಮಾಡಬೇಕು.
- I Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
- ಕಡೆಯದಾಗಿ Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರ್ʼನ್ನು ಕೇಳಗೆ ನೀಡಿರುವ ಬಾಕ್ಸʼನಲ್ಲಿ ತುಂಬಬೇಕು. ನಂತರ Submit ಮೇಲೆ ಕ್ಲಿಕ್ ಮಾಡಿ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಬೇಕು? – Gruha Lakshmi Scheme Documents
- ಮನೆ ಯಜಮಾನಿಯ ಆಧಾರ ಕಾರ್ಡ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ವೋಟರ್ ಕಾರ್ಡ್ ಸಂಖ್ಯೆ
- ಪಡಿತರ ಚೀಟಿ ಸಂಖ್ಯೆ
- ಬ್ಯಾಂಕ್ ಖಾತೆ ಸಂಖ್ಯೆ
- IFSC ಕೋಡ್
- ಫಲಾನುಭವಿಯ ಭಾವಚಿತ್ರ
- ಪತಿಯ ಆಧಾರ ಸಂಖ್ಯೆ
- ಪತಿಯ ಮೊಬೈಲ್ ಸಂಖ್ಯೆ
- ಮನೆ ಯಜಮಾನಿಯ ಆಧಾರ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಮಾಡಿರಬೇಕು
Gruha Lakshmi Scheme Karnataka ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | ಜುಲೈ 19, 2023 ರಿಂದ |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಕೊನೆಯ ದಿನಾಂಕ ಇರುವುದಿಲ್ಲ |
ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ದಿನಾಂಕ | ಆಗಸ್ಟ್ 15 ರ ನಂತರ |
ಅರ್ಜಿ ಪರಿಶೀಲನೆ ದಿನಾಂಕ | ಮಾಹಿತಿ ಲಭ್ಯವಾಗಲಿದೆ |
Gruha Lakshmi Scheme App ಯಾವಾಗ ಬಿಡುಗಡೆ?
“ಗೃಹ ಲಕ್ಷ್ಮೀ” ಯೋಜನೆಯ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ 19 ರಿಂದ ಶುರುವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮನೆ ಯಜಮಾನಿ ಅಕೌಂಟ್‌ಗೆ 2000 ರೂ. ಜಮಾ ಮಾಡುವುದಾಗಿ ಸಿಎಂ ಮಾಹಿತಿ ನೀಡಿದ್ದರು.
ಗೃಹಲಕ್ಷ್ಮಿ ಯೋಜನೆಯಿಂದ 1 ಕೋಟಿ 30 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ. ಈ ವರ್ಷದ ಉಳಿದ ಅವಧಿಗೆ 17,500 ಕೋಟಿ ರೂ. ಹಾಗೂ ಇಡೀ ವರ್ಷಕ್ಕೆ 26,250 ಕೋಟಿ ರೂ. ಅಗತ್ಯವಿದೆ. ಜುಲೈ 19 ರಿಂದ ನೋಂದಣಿ ಪ್ರಾರಂಭವಾಗಿ, ಆಗಸ್ಟ್ 15 ಅಥವಾ 16 ಕ್ಕೆ ಮೊದಲನೇ ಕಂತು ಬಿಡುಗಡೆಯಾಗಲಿದೆ. ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಅವರ ಖಾತೆಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.
Old: ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಪ್ರತ್ಯೇಕ ಆನ್‌ಲೈನ್ ಆ್ಯಪ್ ತಯಾರಿಸಲಾಗಿದೆ. ಆ್ಯಪ್ ಮೂಲಕ ಅರ್ಜಿ ಆಹ್ವಾನಿಸಲು ತಯಾರಿ ನಡೆಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರಿಗೆ ತೋರಿಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಚಿವೆ ತಿಳಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಆ್ಯಪ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಆಗಸ್ಟ್ 15 ರ ನಂತರ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಈ ಯೋಜನೆ ನಿರಂತರವಾಗಿ ಮುಂದುವರೆಯಲಿದೆ.
ಗೃಹಲಕ್ಷ್ಮಿ ಯೋಜನೆಯ ಅರ್ಜಿ (Gruha Lakshmi Application) ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ನೀವೇ ನಿಮ್ಮ ಮೊಬೈಲ್‌ನಲ್ಲಿ ಆ್ಯಪ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ಆ್ಯಪ್ ರೂಪಿಸಲಾಗಿದೆ. ಯಾರಿಗೂ ಒಂದು ರೂಪಾಯಿಯನ್ನು ನೀಡಬೇಡಿ ಎಂದು ಹೇಳಿದರು.
Gruha Lakshmi Scheme Website ಪ್ರಮುಖ ಲಿಂಕ್‌ಗಳು:
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳು ಈ ಕೇಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು, (sevasindhu.karnataka.gov.in/, https://sevasindhugs1.karnataka.gov.in/, https://sevasindhugs.karnataka.gov.in/, sevasindhugs.karnataka.gov.in/gruhalakshmi)
Gruha Lakshmi Scheme Karnataka Application Link | Info |
Gruha Lakshmi App Link | |
Gruha Lakshmi Seva Sindhu Website/ Gruha Lakshmi Yojana Link | sevasindhu.karnataka.gov.in |
Gruha Lakshmi Scheme Official Website Link | sevasindhugs.karnataka.gov.in/gruhalakshmi |
Gruha Lakshmi Yojane ಬಗ್ಗೆ ಕೊನೆಯ ಮಾತು
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಲು ಪ್ರಯತ್ನಿಸಿದ್ದೇವೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಆನ್ಲೈನ್ ಅರ್ಜಿಯನ್ನು ಆ್ಯಪ್ ಮೂಲಕ ಭರ್ತಿ ಮಾಡಿ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಧನ್ಯವಾದಗಳು. ಎಲ್ಲರಿಗೂ ಒಳ್ಳೆಯದಾಗಲಿ.
Gruhalakshmi Scheme Karnataka FAQs
Who is eligible for Gruhalakshmi scheme?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ (AAP), ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
When did Gruhalakshmi scheme start?
ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ.
Where can I apply for Gruha Lakshmi scheme in Karnataka?
ಗೃಹಲಕ್ಷ್ಮಿ ಯೋಜನೆಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
What are the documents required for Gruhalakshmi Yojana in Karnataka?
1) ಮನೆ ಯಜಮಾನಿಯ ಆಧಾರ ಕಾರ್ಡ್ ಸಂಖ್ಯೆ
2) ಮೊಬೈಲ್ ಸಂಖ್ಯೆ
3) ವೋಟರ್ ಕಾರ್ಡ್ ಸಂಖ್ಯೆ
4) ಪಡಿತರ ಚೀಟಿ ಸಂಖ್ಯೆ
How to apply Gruhalakshmi Yojana?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಯ ಪ್ರಶ್ನೋತ್ತರಗಳು
1) ಗೃಹಲಕ್ಷ್ಮಿ ಯೋಜನೆ ಎಂದರೇನು?
“ಗೃಹಲಕ್ಷ್ಮಿ ಯೋಜನೆ” ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಹೊಸ ಯೋಜನೆಯಾಗಿದ್ದು, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಯೋಜನೆಯಾಗಿರುತ್ತದೆ.
2) ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವುದು ಮತ್ತು ಕುಟುಂಬದ ಯಜಮಾನಿತು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆಯು ಉತ್ತಮ ಗುಣ ಮಟ್ಟದಲ್ಲಿರುತ್ತದೆ.
3) ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಏನು?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
4) ಈ ಯೋಜನೆಯ ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?
ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲೀ ಅಥವಾ ಭೌತಿಕವಾಗಲೀ (ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್) ಗಳಲ್ಲಿ ಅರ್ಜಿ ಸಲ್ಲಿಸಬಹುದು.
5) ಈ ಯೋಜನೆಯು ಎಂದಿನಿಂದ ಜಾರಿಗೆ ಬರುತ್ತದೆ?
ಈ ಯೋಜನೆಯು ದಿನಾಂಕ: 15.08.2023 ರಿಂದ ಜಾರಿಗೆ ಬರುತ್ತದೆ.
6) ಈ ಯೋಜನೆಗೆ ಫಲಾನುಭವಿಗಳು ಎಂದಿನಿಂದ ಅರ್ಜಿ ಸಲ್ಲಿಸಬಹುದು?
ಫಲಾನುಭವಿಗಳು ದಿನಾಂಕ:16.07.2023 ರಿಂದ ಅರ್ಜಿ ಸಲ್ಲಿಸಬಹುದು.
7) ಫಲಾನುಭವಿಗಳ ಆಯ್ಕೆ ಯಾವ ರೀತಿ?
ದಿನಾಂಕ:15.07.2023 ರಿಂದ ಅರ್ಜಿ ಪರಿಶೀಲಿಸಿ, ಸ್ವಯಂ ಘೋಷಣೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
8) ಈ ಯೋಜನೆಯ ಲಾಭವು ಯಾವಾಗ ಫಲಾನುಭವಿಗಳ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?
ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಿಂದ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.
9) ಕುಟುಂಬದ ಯಜಮಾನಿ ಮರಣ ಹೊಂದಿದಲ್ಲಿ, ಮುಂದಿನ ಕ್ರಮವೇನು?
ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುವುದು.
10) ಯಾರು ಈ ಯೋಜನೆಗೆ ಅರ್ಹರಾಗುವುದಿಲ್ಲ?
ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಮತ್ತು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ.
11) ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸಬೇಕೆ?
ಅರ್ಜಿ ಸಲ್ಲಿ ಸುವಾಗ ಶುಲ್ಕ ಪಾವತಿಸುವ ಅಗತ್ಯ ಇಲ್ಲ.
12) ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ದೊರೆಯುವುದೇ?
ಹೌದು, ಅರ್ಜಿ ಸಲ್ಲಿಸಿದ ನಂತರ SMS ಮೂಲಕ ಹಾಗೂ ಸೇವಾಸಿಂಧು ಪೋರ್ಟಲ್ ಮೂಲಕ Auto generated ಸ್ವೀಕೃತಿಗಳನ್ನು ಹಾಗೂ ಮಂಜೂರಾತಿ ಆದೇಶವನ್ನು ಪಡೆಯುವುದು.
13) ಯೋಜನೆಯ ಮಂಜೂರಾತಿ ಪ್ರಾಧಿಕಾರ?
ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪ್ರಾಧಿಕಾರವು ಸಂಬಂಧಪಟ್ಟ ತಾಲ್ಲೂಕು/ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿರುತ್ತಾರೆ.
14) ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಈ ಯೋಜನೆಗೆ ಅರ್ಹರೇ?
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸುವ ಕುಟುಂಬದ ಒಬ್ಬ ಮಹಿಳೆಯು ಈ ಯೋಜನೆಗೆ ಅರ್ಹರಾಗುತ್ತಾರೆ.
15) ತಪ್ಪು ಮಾಹಿತಿ/ದಾಖಲಾತಿ ನೀಡಿ, ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ?
ಈಗಾಗಲೇ ಪಾವತಿಸಲಾಗಿರುವ ಸೌಲಭ್ಯದ ಮೊತ್ತವನ್ನು ಅರ್ಜಿದಾರರಿಂದ ಹಿಂಪಡೆಯಲಾಗುವುದು ಮತ್ತು ಅಂತಹ ಫಲಾನುಭವಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer: ಈ ವೆಬ್’ಸೈಟ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಬಂಧಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮಾತ್ರ ಸಿಮೀತ. ಇದು ಸರ್ಕಾರಿ ವೆಬ್’ಸೈಟ್ ಅಲ್ಲ. ನಾವು ಫಲಾನುಭವಿಗಳಿಗೆ ಅನುಕೂಲವಾಗಲೆಂದು ಇಲ್ಲಿ ಮಾಹಿತಿಗಳನ್ನು ನೀಡಲಾಗುತ್ತಿದೆ. ನಾವು ಈ ಯೋಜನೆಗಾಗಿ ಯಾವುದೇ ರೀತಿಯ ಹಣ ಪಡೆಯುವುದಿಲ್ಲ, ಈ ವೆಬ್’ಸೈಟ್ ಮಾಹಿತಿಗಾಗಿ ಮಾತ್ರ.