ಆದಿತ್ಯ ಬಿರ್ಲಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ | Aditya Birla Capital Scholarship 2023 Apply Online @buddy4study.com

ಸಮಸ್ಕಾರ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲಕ್ಕಾಗಿ ಹಣಕಾಸಿನ ನೇರವು ನೀಡುವ (Aditya Birla Capital Scholarship 2023) ವಿದ್ಯಾರ್ಥಿ ವೇತನದ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಓದಿ ಹಾಗೂ ಸ್ಕಾಲರ್‌ಶಿಪ್ʼಗಾಗಿ ಅರ್ಜಿ ಸಲ್ಲಿಸಿ.

ಇವತ್ತಿನ ಸ್ಪರ್ಧಾತ್ಮಕ ಹಾಗೂ ವ್ಯಾಪಾರಿಕಣಗೊಂಡಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚ ಭರಿಸುವುದು ಸಾಧ್ಯವಾಗದೆ ತಮ್ಮ ಅಧ್ಯಯನಯನ್ನು ಅರ್ಧಕ್ಕೆ ಬಿಡುವಂತಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಇಂಹತ ಸ್ಕಾಲರ್‌ಶಿಪ್ʼಗಳು ಪ್ರಯೋಜನಕಾರಿಯಾಗಿವೆ. ಅಗತ್ಯವಿರುವ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಜೀವನವನ್ನು ಉತ್ತಮ ಪಡೆಸಿಕೊಳ್ಳಿ.

Aditya Birla Capital Scholarship 2023 ಮಾಹಿತಿ

ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ನೀಡಲಾಗುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ 2023 ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಹಣಕಾಸಿನ ನೆರವು ನೀಡಿ ಶಿಕ್ಷಣ ಬೆಂಬಲ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈ ಸ್ಕಾಲರ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ 1 ರಿಂದ 12 ನೇ ತರಗತಿ ಮತ್ತು ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಬರಿಸಲು ಮತ್ತು ವೃತ್ತಿ ಕೌನ್ಸಿಲಿಂಗ್ ಮತ್ತು ಲೈಫ್ ಸ್ಕಿಲ್ಸ್‌ನಂತಹ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳನ್ನು ಪಡೆಲು 60,000 ರೂ. (ಒಂದು ಬಾರಿ) ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

Aditya Birla Capital Scholarship 2023 for Class 1st to 8th: 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಕಾಲರ್‌ಶಿಪ್ ಪ್ರಯೋಜ:
1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 18,000 ರೂ. ಸ್ಕಾಲರ್‌ಶಿಪ್ ಪ್ರಯೋಜ ಪಡೆಯಬಹುದು.

Aditya Birla Capital Scholarship 2023 for Class 9th to 12th: 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಕಾಲರ್‌ಶಿಪ್ ಪ್ರಯೋಜ:
9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 24,000 ರೂ. ಸ್ಕಾಲರ್‌ಶಿಪ್ ಪ್ರಯೋಜ ಪಡೆಯಬಹುದು.

Aditya Birla Capital Scholarship 2023 for General Graduation: ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳು/ವಿಶ್ವವಿದ್ಯಾಲಯಗಳಿಂದ ಯಾವುದೇ ಸಾಮಾನ್ಯ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಕಾಲರ್‌ಶಿಪ್ ಪ್ರಯೋಜ:
ಸಾಮಾನ್ಯ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು 36,000 ರೂ. ಸ್ಕಾಲರ್‌ಶಿಪ್ ಪ್ರಯೋಜ ಪಡೆಯಬಹುದು.

Aditya Birla Capital Scholarship 2023 for Professional Graduation: ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಕಾಲರ್‌ಶಿಪ್:
ಸಾಮಾನ್ಯ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು 60,000 ರೂ. ಸ್ಕಾಲರ್‌ಶಿಪ್ ಪ್ರಯೋಜ ಪಡೆಯಬಹುದು.

ಅರ್ಹತೆ:

  • ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6 ಲಕ್ಷ ರೂ. ವನ್ನು ಮೀರಬಾರದು.
  • ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳ ಮಕ್ಕಳು ಮತ್ತು Buddy4Study ಉದ್ಯೋಗಿಗಳು ಅರ್ಹರಲ್ಲ.

ಅಗತ್ಯ ದಾಖಲೆಗಳು:

  • ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಹಿಂದಿನ ತರಗತಿಯ ಮಾರ್ಕ್‌ ಕಾರ್ಡ್
  • ಸರ್ಕಾರ ನೀಡುವ ಗುರುತಿನ ಚೀಟಿ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
  • ಪ್ರಸಕ್ತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬನಫೈಡ್ ಪ್ರಮಾಣಪತ್ರ)
  • ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಅಥವಾ (ಪೋಷಕರ ಬ್ಯಾಂಕ್ ಖಾತೆ ವಿವರ)
  • ಆದಾಯ ಪ್ರಮಾಣಪತ್ರ (Income Certificate)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-09-2023

ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ

ಗೃಹ ಲಕ್ಷ್ಮಿ ಅರ್ಜಿ Status Check ಮಾಡುವ ವಿಧಾನ

ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ

Leave a Comment