ನಮಸ್ಕಾರ, ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಖಾತೆಗೆ 7 ನೇ ಕಂತಿನ ಹಣ (Gruha Lakshmi 7th Installment) ಯಾವಾಗ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.
ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೆ ಬರಗಾಲ ಮತ್ತು ಬೆಲೆ ಏರಿಕೆ ಈ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ವರದಾನವಾಗಿದೆ. ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಗುತ್ತಿದೆ.
Gruha Lakshmi 7th Installment Date:
ಸರ್ಕಾರವು ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯನ್ನು 2023 ರ ಆಗಸ್ಟ 30 ರಿಂದ ಅನುಷ್ಠಾಣಕ್ಕೆ ತರಲಾಗಿದ್ದು, ಅವತ್ತಿನಿಂದ ಈವರೆಗೆ 6 ಕಂತುಗಳ 1,2000 ರೂ. ಹಣವನ್ನು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. 7 ನೇ ಕಂತಿನ 2,000 ರೂಪಾಯಿ ಹಣವನ್ನು ಕೂಡ ಜಮಾ ಮಾಡಲಿದ್ದಾರೆ.
ಸರ್ಕಾರದ ಈ ಹಿಂದೆ ಹೇಳಿದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಲಾಗಿತ್ತು. ಆದರೆ ಚುನಾವಣೆ ಘೋಷಣೆ ಆಗಿರುವುದರಿಂದ ಇನ್ನೂವರೆಗೂ 7ನೇ ಕಂತಿನ ಹಣ ಜಮಾ ಮಾಡಿಲ್ಲ.
ಅದರಂತೆ ಬಹುತೇಕ ಅರ್ಹ ಮನೆ ಯಜಮಾನಿಯರಿಗೆ 6 ಕಂತುಗಳ ಒಟ್ಟು 12 ಸಾವಿರ ರೂ. ಹಣ ಜಮಾ ಆಗಿದೆ.
ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ (Gruha Lakshmi 7th Installment) ಹಣ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಗೃಹಲಕ್ಷ್ಮೀಯರ ಖಾತೆಗಳಿಗೆ GruhaLakshmi DBT ಮೂಲಕ ಜಮಾ ಆಗಬೇಕಿತ್ತು ಆದರೆ ಚುನಾವಣೆ ಸಮಯ ಆಗಿರುವುದರಿಂದ ಯಾವಾಗ ಜಮಾ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
ನಿಮಗೆ ಹಣ ಬರದೆ ಇದ್ದಲ್ಲಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್ ಮಾಡಿ